Sunday, September 6, 2009

My hands at kannada writings!

Having spent valuable quality time to pen down my thoughts and expressions in English, most of which are published at http://karthikhb.wordpress.com/ , I tried to write something in my mother tongue, Kannada, which I would like to share it here. Kudos to google transliterate in blogger which enables to write in all south Indian languages!

I am an amateur writer, so please bare with my kap(v)ithva... :P

Here comes my few ramblings..

ರಾತ್ರಿಯ ಕಗ್ಗತಲಿನಲ್ಲಿ, ಬಾನಿನಂಗಳದ ಚಂದ್ರಮ ಬಂದು ಕುಹಕ ಮಾಡಿಹನು;
ನಿನ್ನ ಮನಸ್ಸಿನ ಅಂಧಕಾರದಲ್ಲಿ ನನ್ನಂತೆ ನೀನು ಒಂಟಿ ಒಬ್ಬೊಂಟಿ ಎಂದು,
ಆಗಸದ ಉಯ್ಯಾಲೆಯಲಿ ಅನುದಿನವೂ ತೇಲಿಬರುವ ನನ್ನಂತೆ ನೀನೂ ದಿನಗೂಲಿಯೆಂದು,
ನನ್ನ ಚುಕ್ಕಿ ಗೆಳೆಯರಂತೆ ನಿನ್ನವರು ಒಂದು ಘಳಿಗೆಗೆ ಮಿನುಗಿ ಹೋದಾರು ಎಂದು!
-------------------------------------------------------(08/08/2009 00:48 hrs)

Another one that I recently wrote...


ಅಂದಿನಾ ನೆನಪುಗಳು ಇಂದಿಗೂ ಕಾಡಿವೆ,
ಕವನಸಂಕಲನದಲ್ಲಡಗಿದ ನವಿಲುಗರಿಯ ಕಂಡು.
ಒಲ್ಲೇ ಎಂದರೂ ಎಲ್ಲೆಲ್ಲೂ ಕಾಣುತಿದೆ,
ಮನದಲ್ಲಿನ ನಿನ್ನ ಚಿತ್ರ ನಯನದಾ ಪರದೆಯ ಮೇಲೆ ಬಂದು.

ರಂಗೇರಿದೆ ಮನವು ನೆನಪಿನಾ ಗುಂಗಿನಲಿ,
ಬಿಸಿಲು ಮಳೆಗಳಾ ಮಿಲನ - ಕಾಮನಬಿಲ್ಲಿನಂತೆ.
ಹಸಿವು ತೀರದು ಆ ಮಧುರ ಕ್ಷಣಗಳ ಸವಿಯಲು,
ನೆನಪು ಇನ್ನಷ್ಟು ಹಸಿ - ಮನವು ಬಲಿತಂತೆ.

ಜೀವನದಾ ಆಟದಲಿ ಮುಳುಗಿಹೋಗಿರುವೆ
ಆಡುತ ಎಂದೂ ಮುಗಿಯದ ಹಾವುಏಣಿ.
ಆದರೂ ಅಡಿಗಡಿಗೆ ಮನದ ದಡಕೆ ಬರುವುದು
ನಿನ್ನ ಮಧುರ ನೆನಪುಗಳ ಹಾಯಿದೋಣಿ.

ಹಾಳಾಗಿ ಮತ್ತೆ ತೇಲಿ ಬಂದಿದೆ ಗಾಳಿಪಟದಂತೆ
ಸೂತ್ರ ಕಿತ್ತುಹೋಗಿದ್ದರೂ ಬಣ್ಣಗಳು ಮಾಸಿಲ್ಲವಿಂದೂ.
ಬಾಲಂಗೋಚಿಯಂತಿರುವಾ ಈ ಸಣ್ಣ ಬದುಕಿನಲಿ
ಅದು ಹೇಗೆ ತಾನೆ ಮರೆಯಲಿ ನಿನ್ನ ಎಂದೆಂದೂ?

----------------------------------------------------------(03-09-2009, 00:36 hrs)